Coronavirus : ಇದೆಂಥಾ ಕಲಿಗಾಲ..! ಸ್ಮಶಾನದ ಮುಂದೆಯೂ ಹೌಸ್ ಫುಲ್ ಬೋರ್ಡ್ ..!

ಬೆಂಗಳೂರು  ನಗರದಲ್ಲಿ ಸುಮಾರು 13ಸ್ಮಶಾನಗಳಿವೆ.  ಕರೋನಾ ಯಾವ ರೀತಿಯಲ್ಲಿ ತಾಂಡವ ಆಡಿದೆ ಎಂದರೆ ಈ ಸ್ಮಶಾನದ ಸ್ಥಿತಿ ನೋಡಿದರೆ ಗೊತ್ತಾಗುತ್ತದೆ. ಬೆಂಗಳೂರು ನಗರದಲ್ಲಿರುವ ಚಾಮರಾಜಪೇಟೆ ಸ್ಮಶಾನದ ಕರೋನಾದ ರುದ್ರ ತಾಂಡವದ ಚಿತ್ರಣ ನೀಡುತ್ತಿದೆ.

Written by - Ranjitha R K | Last Updated : May 4, 2021, 12:29 PM IST
  • ಚಾಮರಾಜಪೇಟೆ ಸ್ಮಶಾನದಲ್ಲಿ ಹೌಸ್ ಫುಲ್ ಬೋರ್ಡ್ ..!
  • ಬೆಂಗಳೂರಿನ 13 ಸ್ಮಶಾನಗಳಲ್ಲಿ ಇದೇ ಸ್ಥಿತಿ
  • ಶವ ಸಂಸ್ಕಾರಕ್ಕೆ ಹೆಚ್ಚುವರಿ 230 ಎಕರೆ ಜಮೀನು ನೀಡಿದ ಸರ್ಕಾರ
Coronavirus : ಇದೆಂಥಾ ಕಲಿಗಾಲ..! ಸ್ಮಶಾನದ ಮುಂದೆಯೂ ಹೌಸ್ ಫುಲ್ ಬೋರ್ಡ್ ..! title=
ಚಾಮರಾಜಪೇಟೆ ಸ್ಮಶಾನದಲ್ಲಿ ಹೌಸ್ ಫುಲ್ ಬೋರ್ಡ್ (Photo zee news)

ಬೆಂಗಳೂರು  : ದೇಶದಲ್ಲಿ ಹಬ್ಬುತ್ತಿರುವ ಕರೋನಾ ವೈರಸ್ (Coronavirus) ಸೋಂಕಿನ ಮುಂದೆ ಇಡೀ ದೇಶವೇ ಅಸಹಾಯಕವಾಗಿದೆ.  ಪ್ರತಿದಿನ ಹೊಸ ಕರೋನಾ ಪ್ರಕರಣಗಳು (COVID-19)ವರದಿಯಾಗುತ್ತಿವೆ.  ಕರೋನಾ ಸೋಂಕಿನಿಂದ ಸಂಭವಿಸುತ್ತಿರುವ ಸಾವು ನೋವುಗಳು ಭೀತಿಗೊಳಿಸುತ್ತಿದೆ. ಶವಸಂಸ್ಕಾರಕ್ಕಾಗಿ ಸರತಿ ಸಾಲಿನಲ್ಲಿ ನಿಂತು ಕಾದಿದ್ದೂ ಆಯಿತು.  ಇದೀಗ ಶವಸಂಸ್ಕಾರಕ್ಕೂ ಸ್ಥಳ ಕಡಿಮೆಯಾಗಿದೆ. ವ್ಯವಸ್ಥೆಯೇ ಅಸಹಾಯಕರಾದಂತೆ ಕಾಣುತ್ತಿದೆ.

ಶವಾಗಾರದಲ್ಲೂ ಹೌಸ್ ಫುಲ್ ಬೋರ್ಡ್..!
ಬೆಂಗಳೂರು (Bengaluru) ನಗರದಲ್ಲಿ ಸುಮಾರು 13ಸ್ಮಶಾನಗಳಿವೆ.  ಕರೋನಾ ಯಾವ ರೀತಿಯಲ್ಲಿ ತಾಂಡವ ಆಡಿದೆ ಎಂದರೆ ಈ ಸ್ಮಶಾನದ ಸ್ಥಿತಿ ನೋಡಿದರೆ ಗೊತ್ತಾಗುತ್ತದೆ. ಬೆಂಗಳೂರು ನಗರದಲ್ಲಿರುವ ಚಾಮರಾಜಪೇಟೆ ಸ್ಮಶಾನದ ಕರೋನಾದ (Coronavirus) ರುದ್ರ ತಾಂಡವದ ಚಿತ್ರಣ ನೀಡುತ್ತಿದೆ. ದಿನಕ್ಕೆ ಸಾಯುವವರ ಸಂಖ್ಯೆ ಹೆಚ್ಚುತ್ತಿದ್ದು, ಈ  ಸ್ಮಶಾನದಲ್ಲಿ ನೇರವಾಗಿ ಹೌಸ್ ಫುಲ್ ಬೋರ್ಡ್ (Houseful board) ಹಾಕಲಾಗಿದೆ. ದಹನಕ್ಕೆ ಇನ್ನಷ್ಟು ದೇಹಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಸ್ಮಶಾನ ನಿರ್ವಾಹಕರು ಹೇಳುತ್ತಿದ್ದಾರೆ. ಬೆಂಗಳೂರಿನ ಎಲ್ಲಾ 13 ಶ್ಮಶಾನಗಳಲ್ಲೂ ಇದೇ ಸ್ಥಿತಿ.  ಅಂತ್ಯಕ್ರಿಯೆಗೂ ಕ್ಯೂನಲ್ಲಿ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿದೆ.  

ಇದನ್ನೂ ಓದಿ : Cyclone Effect : ಚಂಡಮಾರುತ ಚಲನೆ ಇಂದಿನಿಂದ ಮೇ 6 ರವರೆಗೆ ರಾಜ್ಯದಲ್ಲಿ ಭಾರೀ ಮಳೆ..!

ಸ್ಮಶಾನಕ್ಕೆ 230 ಎಕರೆ ನೀಡಿದ ಸರ್ಕಾರ :
ಸನ್ನಿವೇಶ ಎಷ್ಟೊಂದು ಭೀಕರವಾಗಿದೆಯೆಂದರೆ, ರಾಜ್ಯ ಸರ್ಕಾರ (State government) ಬೆಂಗಳೂರು ಸುತ್ತಮುತ್ತಲಿನ ಸುಮಾರು 230 ಎಕರೆ ಜಮೀನನ್ನು ಬಿಬಿಎಂಪಿಗೆ (BBMP) ಬಿಟ್ಟು ಕೊಟ್ಟಿದೆ. ಈ 230 ಎಕರೆ ಭೂಮಿಯಲ್ಲಿ ಕರೋನಾದಿಂದ ತೀರಿಕೊಂಡವರ ಅಂತ್ಯಸಂಸ್ಕಾರ ನಡೆಯಲಿದೆ.  ಇಷ್ಟೇ ಅಲ್ಲ, ತಮ್ಮ ಸ್ವಾಧೀನದಲ್ಲಿರುವ ಭೂಮಿಯಲ್ಲಿ ಕರೋನಾದಿಂದ ತೀರಿಕೊಂಡವರ ಅಂತ್ಯ ಸಂಸ್ಕಾರಕ್ಕೂ ಅನುಮತಿ ನೀಡಲಾಗಿದೆ.

ಕರ್ನಾಟಕದ ಕರೋನಾ ಬುಲೆಟಿನ್ :
ರಾಜ್ಯದಲ್ಲಿ ಸೋಮವಾರ ಒಂದೇ ದಿನ 239 ರೋಗಿಗಳು ಮೃತಪಟ್ಟಿದ್ದಾರೆ.  ಈ ಮೂಲಕ ಸಾವಿನ ಸಂಖ್ಯೆ 16250ಕ್ಕೂ ಅಧಿಕವಾಗಿದೆ.  ಇದೇ ವೇಳೆ ಸೋಮವಾರ ಒಂದೇ ದಿನ 44438 ಜನರಿಗೆ ಕರೋನಾ ತಟ್ಟಿದೆ. 

ಇದನ್ನೂ ಓದಿ : ಚಾಮರಾಜನಗರದಲ್ಲಿ ಶಾಕಿಂಗ್ ನ್ಯೂಸ್.! ಆಕ್ಸಿಜನ್ ಸಿಗದೇ 24 ಕರೋನಾ ರೋಗಿಗಳ ಸಾವು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News